ಟಗರು ಚಿತ್ರಕ್ಕೆ ಶುಭ ಕೋರಿದ ಪೂರಿ ಜಗನ್ನಾಥ್

ಟಗರು ಚಿತ್ರಕ್ಕೆ ಶುಭ ಕೋರಿದ ಅಪ್ಪು ಚಿತ್ರ ಡೈರೆಕ್ಟರ್ ಪೂರಿ ಜಗನ್ನಾಥ್. ಟಗರು ಟ್ರೈಲರ್ ನಾನು ನೋಡಿದ್ದೇನೆ. ನಿರ್ದೇಶಕ ದುನಿಯಾ ಸೂರಿ ಅವರ ಕೆಲಸವನ್ನು ನಾನು ಮೆಚ್ಚುತ್ತೇನೆ. ಟ್ರೈಲರ್ ತುಂಬಾ ಚೆನ್ನಾಗಿದೆ ಚಿತ್ರದಲ್ಲಿರುವ ಗೀತೆಗಳು ಸಹ ಉತ್ತಮವಾಗಿವೆ ಎಂದು ತಿಳಿಸಿದರು. ನಾನು ಮೇಕಿಂಗ್ ಕೂಡ ನೋಡಿದ್ದೇ ಸಂಪೂರ್ಣ ಚಿತ್ರತಂಡವು ಶಕ್ತಿಯುತವಾಗಿ ಕಾಣುತ್ತಿತ್ತು ಎಂದು ಮೆಚ್ಚುಗೆ ತಿಳಿಸಿದರು.

 

 

ಶಿವಣ್ಣ ನನಗೆ ಅತ್ಯಂತ ಇಷ್ಟವಾದ ವ್ಯಕ್ತಿ ಎಂದು ಹೇಳಿದ ಜಗನ್ನಾಥ್ ದಿನ ಕಳೆದಂತೆ ನವ ಯುವಕನಂತೆ ಶಿವಣ್ಣ ಮಿಂಚುತ್ತಿದ್ದಾರೆ ಎಂದು ಮೆಚ್ಚುಗೆಯ ಮಾತುಗಳನ್ನು ಆಡಿದರು. ಚಿತ್ರತಂಡಕ್ಕೆ ಶುಭಕೋರಿದ ಪುರಿ ಜಗನ್ನಾಥ ಚಿತವು ಅತ್ಯಂತ ಯಶಸ್ಸು ಕಾಣಲಿ ಎಂದು ನಾನು ಆಶಿಸುತ್ತೇನೆ ಎಂದು ಹೇಳಿದರು.

 

 

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಟಗರು ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ . ಟಗರು ಚಿತ್ರದ ಟ್ರೈಲರ್ ಮತ್ತು ಹಾಡುಗಳು ಈಗಾಗಲೇ ಹಿಟ್ ಆಗಿದ್ದು , ಸಿನೆಮಾದ ನಿರೀಕ್ಷೆಯನ್ನು ಹೆಚ್ಚಿಸಿವೆ . ಹೆಚ್ಚಿನ ನಿರೀಕ್ಷೆಗಳಿರುವ ಟಗರು ಚಿತ್ರಕ್ಕೆ ಸೂರಿ ಅವರ ನಿರ್ದೇಶನವಿದೆ .

 

 

 

ಟಗರು ಚಿತ್ರ ಶಿವಣ್ಣ ಮತ್ತು ಸೂರಿ ಕಾಂಬಿನೇಶನ್ ನ ಎರಡನೇ ಚಿತ್ರವಾಗಿದೆ . ಈ ಹಿಂದೆ ಸೂರಿ ಅವರು ಶಿವಣ್ಣ ಅವರಿಗೆ ಕಡ್ಡಿಪುಡಿ ಚಿತ್ರವನ್ನು ನಿರ್ದೇಶಿಸಿದ್ದರು . ಟಗರು ಚಿತ್ರದ ಬಿಡುಗಡೆಯ ದಿನ ಇನ್ನೂ ನಿಗದಿಯಾಗಿಲ್ಲವಾದರೂ ಅಭಿಮಾನಿಗಳು ಬೆಂಗಳೂರಿನ ಊರ್ವಶಿ ಚಿತ್ರಮಂದಿರದ ಮುಂದೆ ಕಟೌಟ್ ನಿಲ್ಲಿಸಿ ಸಂಭ್ರಮಿಸಿದ್ದಾರೆ .

ವಿಡಿಯೋ ನೋಡಿ:

ಚಂದನ್ ಶೆಟ್ಟಿಯ ಮನಕಲಕುವ ಫ್ಲ್ಯಾಶ್‌ಬ್ಯಾಕ್!

ಈ ಹಿಂದಿನ ವಿಜೇತರು ಗೆದ್ದ ದುಡ್ಡನ್ನು ಏನು ಮಾಡೋದು ಅನ್ನೋ ಲೆಕ್ಕಾಚಾರದಲ್ಲಿ ಇದ್ದರು. ಆದರೆ ಚಂದನ್ ಶೆಟ್ಟಿ “ಕನ್ನಡ ಹಡುಗಳನ್ನು ಇಂಗ್ಲಿಷ್ ಜಾಗದಲ್ಲಿ ಕೂರಿಸಬೇಕು” ಅಂದನಲ್ಲಾ? ಅದು ನಿಜವಾದ ಮತ್ತು ಆತನ ಹೃದಯದಲ್ಲಿ ಜೀವ ಪಡೆದಿರುವ ಕನ್ನಡ ಪ್ರೀತಿ…

ಬಿಗ್‌ಬಾಸ್ ಸೀಜನ್ ಐದರ ಅಂತಿಮ ಫಲಿತಾಂಶ ಮೊಟ್ಟಮೊದಲ ಸಲ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಬೇರೆ ಸ್ಪರ್ಧಿಗಳತ್ತ ಒಲವಿದ್ದ ಪ್ರೇಕ್ಷಕರೂ ಕೂಡಾ ಚಂದನ್‌ಶೆಟ್ಟಿ ಗೆದ್ದಿರೋದರ ಬಗ್ಗೆ ಖುಷಿ ಹೊಂದಿದ್ದಾರೆ. ಈ ಮೂಲಕ ಏನಾದರೂ ಸಾಧಿಸಬೇಕೆಂಬ ಕನಸು ಹೊತ್ತ ಹುಡುಗನೊಬ್ಬ ವಿಜಯಿಯಾದದ್ದು ಬಿಗ್‌ಬಾಸ್ ಶೋಧ ಏಕೈಕ ಸಾರ್ಥಕತೆಯಾಗಿಯೂ ಪ್ರೇಕ್ಷಕರನ್ನು ತೃಪ್ತವಾಗಿಟ್ಟಿದೆ. ಈ ರಿಯಾಲಿಟಿ ಶೋದ ಬಗೆಗಿನ ಅಷ್ಟೂ ತಕರಾರುಗಳನ್ನು ಬದಿಗಿಟ್ಟು ಚಂದನ್ ಎಂಬ ಹುಡುಗನ ಗೆಲುವನ್ನಷ್ಟೇ ದೃಷ್ಟಿಯಲ್ಲಿಟ್ಟುಕೊಂಡು ನೋಡಿದರೆ ಈ ಬಾರಿಯ ಬಿಗ್‌ಬಾಸ್ ಸೀಜನ್ ನಿಜಕ್ಕೂ ಸಾರ್ಥಕವಾಗಿದೆ ಅಂತ ಯಾರಿಗಾದರೂ ಅನ್ನಿಸದಿರೋದಿಲ್ಲ. ಯಾಕೆಂದರೆ, ಚಂದನ್ ಶೆಟ್ಟಿಯ ಹಿನ್ನೆಲೆಯೇ ಅಂಥಾದ್ದಿದೆ!

 

 

ಬಿಗ್‌ಬಾಸ್ ಶೋಗೆ ಚಂದನ್ ಶೆಟ್ಟಿ ಸ್ಪರ್ಧಿಯಾಗಿ ಬಂದಾಗ ತಮ್ಮ ನೆಚ್ಚಿನ ಸಿಂಗರ್ ಬಂದ ಅಂತ ಹರ್ಷಗೊಂಡವರ ಸಂಖ್ಯೆಗಿಂತಲೂ ಈ ಹುಡುಗ ಯಾರೆಂಬ

 

ಪ್ರಶ್ನೆ ಹೊತ್ತವರ ಸಂಖ್ಯೆಯೇ ದೊಡ್ಡ ಮಟ್ಟದಲ್ಲಿತ್ತು. ಹಾಗಂತ ಚಂದನ್ ಶೆಟ್ಟಿ ತನ್ನೂರಿನಿಂದ ಬಸ್ಸು ಹತ್ತಿ ಬಿಡದಿಯಲ್ಲಿಳಿದು ಸೀದಾ ಬಿಗ್‌ಬಾಸ್ ಮನೆ ಸೇರಿಕೊಂಡವನಲ್ಲ. ಕನಸು ಕಟ್ಟಿಕೊಂಡು ಬೆಂಗಳೂರಿಗೆ ಬಂದಿಳಿಯೋ ಎಲ್ಲ ಜೀವಗಳನ್ನು ಈ ಬೆಂಗಳೂರು ಎಂತೆಂಥಾ ಅಗ್ನಿಪರೀಕ್ಷೆಗೀಡುಮಾಡುತ್ತದೋ ಅಂಥವನ್ನೆಲ್ಲ ಎದುರುಗೊಂಡೇ ಬಿಗ್‌ಬಾಸ್ ಮನೆ ಸೇರಿಕೊಂಡಿದ್ದವನು ಚಂದನ್ ಶೆಟ್ಟಿ.

 

 

 

 

ಹಾಸನದ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಹುಟ್ಟಿದ ಚಂದನ್ ಆರಂಭಿಕವಾಗಿ ಓದಿದ್ದು ಸಕಲೇಶಪುರದಲ್ಲಿ. ನಂತರ ದಕ್ಷಿಣಕನ್ನಡದ ಪುತ್ತೂರಿನಲ್ಲಿ ಪಿಯುಸಿ ವ್ಯಾಸಂಗ ಮುಗಿಸಿಕೊಂಡಿದ್ದ ಚಂದನ್‌ಗೆ ಸಣ್ಣ ವಯಸ್ಸಿನಿಂದಲೂ ಸಂಗೀತದ ಬಗ್ಗೆ ವಿಪರೀತ ಆಸಕ್ತಿ ಇತ್ತು. ಆದರೆ ಬೆನ್ನುಹತ್ತಿದ ಸಂಕಷ್ಟ, ಜವಾಬ್ದಾರಿಗಳು ಬಿಡಬೇಕಲ್ಲಾ? ಒಂದು ಹಂತದಲ್ಲಿ ತನ್ನ ಕನಸಿಗಿಂತಲೂ ಮನೆ ಮಂದಿಯನ್ನು ಚೆಂದಗೆ ನೋಡಿಕೊಳ್ಳೋದೇ ಮೊದಲು ತಾನು ಮಾಡಬೇಕಾದ ಕೆಲಸ ಅಂದುಕೊಂಡ ಚಂದನ್ ಮೈಸೂರಿನಲ್ಲಿ ಎಂಬಿಎ ಮುಗಿಸಿಕೊಂಡ. ಬೆಂಗಳೂರಿಗೆ ಹೋದರೆ ಒಂದು ಕೆಲಸವನ್ನೂ ಹುಡುಕಿಕೊಂಡು ಅದರ ಮಧ್ಯೆಯೇ ತನ್ನ ಕನಸನ್ನೂ ಈಡೇರಿಸಿಕೊಳ್ಳಬಹುದು ಎಂಬ ಆಸೆಯಿಂದ ಬೆಂಗಳೂರಿನ ಬಸ್ಸು ಹತ್ತಿದ್ದ.

 

 

ಹಾಗೆ ಬೆಂಗಳೂರಿಗೆ ಬಂದಿಳಿದ ಚಂದನ್ ಹಳ್ಳಿ ಕಡೆಯಿಂದ ಈ ಮಹಾನಗರಿಗೆ ಬರುವ ಬಹುತೇಕರು ಅನುಭವಿಸೋ ಎಲ್ಲ ಕಷ್ಟಗಳನ್ನೂ ಅನುಭವಿಸಿದ್ದ,. ಕಡೆಗೂ ಒಂದು ಕಾಲ್‌ಸೆಂಟರ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡರೂ ಕಟ್ಟಿಕೊಂಡಿದ್ದ ಕನಸುಗಳು ಕೈ ಬಿಟ್ಟಿರಲಿಲ್ಲ, ಬದುಕು ಬದಲಾಗಲೂ ಇಲ್ಲ. ಆ ಕಾಲಕ್ಕೆ ಕಿಷ್ಕಿಂಧೆಯಂಥಾದ್ದೊಂದು ಕೋಣೆಯಲ್ಲಿ ವಾಸವಿದ್ದ ಚಂದನ್ ಅದೊಂದು ದಿನ ಕಾಲ್ ಸೆಂಟರ್ ಕೆಲಸವನ್ನೂ ಬಿಟ್ಟು ತನ್ನಿಷ್ಟದ ಸಂಗೀತ ಕ್ಷೇತ್ರದಲ್ಲಿಯೇ ಮುಂದುವರೆಯಬೇಕೆಂಬ ಹಂಬಲದಿಂದ ಮುಂದುವರೆದಾಗಲೂ ಮೊದಲಿಗೆ ಸಿಕ್ಕಿದ್ದು ಅವಮಾನ ಮಾತ್ರ!

ಅಲ್ಲಿಲ್ಲಿ ಅಲೆದು ಕಡೆಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಗರಡಿ ಸೇರಿಕೊಂಡ ಚಂದನ್ ಅಲ್ಲಿಯೇ ನೆಲೆ ನಿಂತಿದ್ದ. ಜನ್ಯಾ ಸುದೀಪ್ ಅಭಿನಯದ ವರದ ನಾಯಕ ಚಿತ್ರದಲ್ಲಿ ಒಂದು ಹಾಡು ಹಾಡೋ ಅವಕಾಶವನ್ನೂ ಕೊಟ್ಟಿದ್ದರು. ಇದಾದ ನಂತರ ಈತ ಅದೆಷ್ಟೋ ಚಿತ್ರಗಳಿಗೆ ಹಾಡು ಬರೆದಿದ್ದ. ಎಷ್ಟೋ ಹಾಡುಗಳನ್ನು ಹಾಡಿದ್ದ. ಆದರೆ ಒಂದೇ ಒಂದು ವೇದಿಕೆಯಲ್ಲಿಯೂ ಈ ಹುಡುಗನನ್ನು ಗುರುತಿಸುವ ಕೆಲಸ ಆಗಲೇ ಇಲ್ಲ. ತಾನು ಪ್ರಸಿದ್ಧ ಗಾಯಕನಾಗಬೇಕೆಂಬ ಹಂಬಲದಿಂದಿದ್ದ ಚಂದನ್ ಇದರಿಂದ ಪ್ರತೀ ಕ್ಷಣವೂ ಘಾಸಿಗೊಳ್ಳುತ್ತಿದ್ದ. ತಾನು ಹಾಡು ಬರೆದ, ಹಾಡಿದ ಚಿತ್ರಗಳ ಕಾರ್ಯಕ್ರಮಗಳಾದಾಗ ತನ್ನನ್ನು ಗುರುತಿಸುತ್ತಾರೆಂಬ ಆಸೆಗಣ್ಣಿನಿಂದ ಕಾಯುತ್ತಿದ್ದ ಚಂದನ್‌ಗೆ ನಿರಾಸೆಯೊಂದೇ ಗಟ್ಟಿಯಾಗುತ್ತಿತ್ತು.

 

 

ಏನಾದರೋಂದು ಮಾಡದೇ ಹೋದರೆ ಯಾರ್‍ಯಾರದ್ದೋ ನೆರಳ ನಡುವೆ ಕಳೆದು ಹೋಗೋದು ಗ್ಯಾರೆಂಟಿ ಎಂಬ ಸತ್ಯ ಗೊತ್ತಾಗಿ ಹೋಗಿತ್ತು. ೨೦೧೬ರಲ್ಲಿ ಇಂಥಾದ್ದೇ ಒಂದು ನಿರಾಸೆಯಾದಾಗ ಚಂದನ್ ಆ ಹತಾಶೆಯನ್ನು ಎದೆಯಲ್ಲಿಟ್ಟುಕೊಂಡೇ ಹಾಳಾಗೋದೆ ಎಂಬ ರ್‍ಯಾಪ್ ಶೈಲಿಯ ಹಾಡೊಂದನ್ನು ಬರೆದ. ನಂತರ ಅದನ್ನು ತಾನೇ ಹಾಡಿ ವೀಡಿಯೋ ಮಾಡಿ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದ್ದ. ಅದಕ್ಕೆ ಸಿಕ್ಕ ಅಗಾಧವಾದ ಪ್ರತಿಕ್ರಿಯೆ, ಮೆಚ್ಚುಗೆಗಳನ್ನು ಕಂಡು ಖುದ್ದು ಚಂದನ್ ಶೆಟ್ಟಿಯೇ ಥ್ರಿಲ್ ಆಗಿದ್ದ. ಆ ನಂತರ ಅನಾಮಿಕನಾಗಿದ್ದ ಈತ ಹಂತ ಹಂತವಾಗಿ ಲೈಮ್‌ಲೈಟ್‌ಗೆ ಬರಲಾರಂಭಿಸಿದ್ದ. ಪವರ್ ಚಿತ್ರದಲ್ಲಿ ಈತನೇ ಬರೆದಿದ್ದ ಧಮ್ ಪವರೇ ಎಂಬ ಹಾಡಂತೂ ಚಂದನ್‌ಗೆ ಅಪಾರ ಖ್ಯಾತಿ ತಂದು ಕೊಟ್ಟಿತ್ತು. ೩ ಪೆಗ್ ಮತ್ತು ಪಕ್ಕಾ ಚಾಕ್ಲೇಟ್ ಗರ್ಲ್ ಹಾಡುಗಳೂ ಚಂದನ್ ಜನಪ್ರಿಯತೆಯನ್ನು ಹೆಚ್ಚಿಸಿದವು.

 

 

 

ಹೀಗೆ ಹಂತ ಹಂತವಾಗಿ ಬೆಳೆದು ಬಂದಿದ್ದ ಚಂದನ್ ಬಿಗ್‌ಬಾಸ್ ಮನೆ ಸೇರುವ ಹೊತ್ತಿಗೆಲ್ಲಾ ಮುಖ್ಯ ಗಾಯಕನಾಗಿ, ಸಂಗೀತ ನಿರ್ದೇಶಕನಾಗಿ ಅವಕಾಶ ಗಿಟ್ಟಿಸಿಕೊಂಡಿದ್ದ. ಈಗಂತೂ ಅವಕಾಶಗಳು ಚಂದನ್ ಶೆಟ್ಟಿಯನ್ನೇ ಅರಸಿ ನಿಂತಿವೆ. ಒಟ್ಟಾರೆಯಾಗಿ ಓರ್ವ ಸಾಮಾನ್ಯ ಹುಡುಗನಾಗಿ ಬೆಳೆದು ಬಂದ ಚಂದನ್ ಶೆಟ್ಟಿಯ ಬಿಗ್‌ಬಾಸ್ ಗೆಲುವನ್ನು ಆತ ನಡೆದು ಬಂದ ಕಷ್ಟದ ಹಾದಿಗಳೇ ಎಲ್ಲರೂ ಸಂಭ್ರಮಿಸುವಂತೆ ಮಾಡಿವೆ!

ವಾಸ್ತುಶಾಸ್ತ್ರದ ಪ್ರಕಾರ ನಿಮ್ಮ ಮನೆಯ ಗೋಡೆಗಳಿಗೆ ಯಾವ ಬಣ್ಣದ ಬಳಿದರೆ ಒಳ್ಳೇದು ಗೊತ್ತಾ

ಬಣ್ಣಗಳಲ್ಲಿ ಹಲವಾರುಗಳು ಇದೆ ಕೆಲವರಿಗೆ ಕಪ್ಪು ಬಣ್ಣ ,ಕೆಂಪು ಬಣ್ಣ ,ಹಳದಿ, ನೀಲಿ, ಹಸಿರು , ಮತ್ತೆ ಗಿಳಿ ಹಸಿರು ಹೀಗೆ ಹಲವಾರು ರೀತಿಯಲ್ಲಿ ಹಲವು ಬಗೆಬಗೆಯ ಬಣ್ಣಗಳನ್ನ ನೀವು ಇಷ್ಟಪಡುತ್ತೀರಾ .ನಾವು ಒಂದು ಯಾವುದಾರೂ ವಸ್ತುವನ್ನು ಕೊಂಡುಕೊಳ್ಳುವಾಗ ಅದರ ಬಣ್ಣವನ್ನು ನೋಡಿ ಕೊಳ್ಳುತ್ತೇವೆ.

ಹೀಗೆಯೇ ನಮ್ಮ ಮನೆಗಳಿಗೆ ಗೋಡೆಗಳ ಮೇಲೆ ಬಣ್ಣವನ್ನು ಬಳಿಯುತ್ತೇವೆ. ನಾವು ವಿವಿಧ ರೀತಿಯ ಬಣ್ಣಗಳನ್ನ ಮನೆಯ ಗೋಡೆಮೇಲೆ ಬಳಿಯುತ್ತೇವೆ ಆದರೆ ವಾಸ್ತು ಶಾಸ್ತ್ರವು ಯಾವ ಬಣ್ಣ ಬಳಿದರೆ ಉಂಟಾಗುವ ತೊಂದರೆಗಳು
ಕಡಿಮೆಯಾಗುತ್ತದೆ ಎಂದು ವಾಸ್ತು ಶಾಸ್ತ್ರರು ಹೇಳುತ್ತಾರೆ.

 

 

ತಿಳಿ ನೀಲಿ ಬಣ್ಣ
ಮನೆಯ ಎಲ್ಲ ಸದ್ಯಸರಿಗೆ ನೆಮ್ಮದಿ ಮತ್ತು ಮಾನಸಿಕ ಪ್ರಶಾಂತತೆ ಬರಲು ಈ ಬಣ್ಣವನ್ನು ಮನೆಯ ಗೋಡೆಮೇಲೆ ಬಳಿದರೆ.ಇದರಿಂದಾಗಿ ಮನೆಯಲ್ಲಿ ನೆಮ್ಮದಿ ,ಶಾಂತಿ ,ಮತ್ತು ಮಾನಸಿಕ ಒತ್ತಡ ಕಡಿಮೆಯಾಗುವುದು.

 

 

ತಿಳಿ ಹಸಿರು ಬಣ್ಣ
ಮದುವೆಯಾದವರು ಮತ್ತು ಗರ್ಭಿಣಿಯವರು ತಿಳಿ ಹಸಿರು ಬಣ್ಣದ ಗೋಡೆಗಳಿರುವ ಬೆಡ್ ರೂಮ್ ನಲ್ಲಿ ಇರಬೇಕಂತೆ ಯಾಕೆಂದರೆ ಗರ್ಭವ್ಯವಸ್ಥೆಯಲ್ಲಿರುವ ಮಗುವಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲವಂತೆ.ಮತ್ತು ಬಹು ಬೇಗನೆ ಮಕ್ಕಳು ಆಗುತ್ತವೆ ಅಂತೇ ಎಂದು ವಾಸ್ತು ಶಾಸ್ತ್ರರು ಹೇಳುತ್ತಾರೆ.

 

 

 

ಬಿಳಿಯ ಬಣ್ಣ
ನಿಮಗೆ ಯಾವುದರ ಬಗ್ಗೆನೋ ಯೋಚನೆ ಇಲ್ವಾ, ಏನು ಮಾಡುವುದಕ್ಕೂ ಮನಸ್ಸು ಇಲ್ವಾ ಮತ್ತೆ ಜ್ಞಾನಪಕ ಶಕ್ತಿ ಕಡಿಮೆಯಾಗಿದಿಯೇ ಹಾಗಾದರೆ ನಿಮ್ಮ ಮನೆ ಗೋಡೆ ಮೇಲೆ ಬಿಳಿ ಬಣ್ಣ ಬಳಿಸಬೇಕು ಇದರಿಂದ ನಿಮಗೆ ಜ್ಞಾನಪಕ ಶಕ್ತಿ ಮತ್ತು ಏನಾದರು ಕೆಲಸ ಮಾಡಲು ನಿಮಗೆ ಮನಸ್ಸು ಬರುತ್ತದೆ ಎಂದು ಹೆಳುತ್ತಾರೆ.

 

 

 

ಕೆಂಪು ಬಣ್ಣ
ನಿಮ್ಮ ಮನೆಯಲ್ಲಿ ನಿಮ್ಮ ದಂಪತಿ ಜೊತೆ ದಿನ ಜಗಳ , ಕಲಹಗಳಿದ್ದರೆ ,ಮನೆಯ ಗೋಡೆ ಮತ್ತು ಬೆಡ್ ರೂಮ್ ಗೆ ಕೆಂಪು ಬಣ್ಣವನ್ನು ಬಳಿಯಿರಿ. ಈ ರೀತಿ ಮಾಡುವುದರಿಂದ ಗಂಡ ಮತ್ತು ಹೆಂಡತಿ ನಡುವೆ ಪ್ರೀತಿ ಜಾಸ್ತಿಯಾಗುತ್ತದೆ ,ಮತ್ತು ಹೆಚ್ಚು ಶೃಂಗಾರ ಭಾವನೆಗಳು ಬರುತ್ತವೆ. ಮದುವೆ ಆದ ನವ ದಂಪತಿಗಳು ಈ ಕೆಂಪು ಬಣ್ಣದ ಬೆಡ್ ರೂಮ್ ಅಲ್ಲಿ ಮಲಗಿದರೆ ಮುಂದೆ ಯಾವುದೇ ರೀತಿಯ ಕಲಹಗಳು ಮತ್ತು ಮನಸ್ತಾಪ ಬರುವುದಿಲ್ಲ ಮತ್ತು ಜೀವನ ಸುಖವಾಗಿರುತ್ತದೆ.

ಬಿಗ್’ಬಾಸ್ ವೇದಿಕೆಯ ಮೇಲೆ ದರ್ಶನ್ ಹೆಸರನ್ನು ಪ್ರಸ್ತಾಪಿಸಿದ ಕಿಚ್ಚ ಸುದೀಪ್!

 

ಕೆಲವು ತಿಂಗಳುಗಳ ಹಿಂದೆ ಚಾಲೆಂಜಿಂಗ್ ಸ್ಟಾರ್‌ ದರ್ಶನ್, ”ನಾನು ಮತ್ತು ಸುದೀಪ್ ಗೆಳೆಯರಲ್ಲ” ಎಂದು ಟ್ವೀಟ್ ಮಾಡುವ ಮೂಲಕ ತಮ್ಮಿಬ್ಬರ ನಡುವಿನ ಜಗಳವನ್ನು ಬಹಿರಂಗಪಡಿಸಿದ್ದರು. ಅಲ್ಲಿಂದ ಇವರಿಬ್ಬರ ನಡುವೆ ಇಬ್ಬರ ನಡುವೆ ಮಾತಿಲ್ಲ, ಕಥೆಯಿಲ್ಲ ಎನ್ನುವುದು ವಾಸ್ತವ. ಇವರಿಬ್ಬರ ಈ ಮುನಿಸಿನಿಂದ ಇವರ ಅಭಿಮಾನಿಗಳ ವಾದ-ವಿವಾದಗಳು ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಯಾಗಿದ್ದವು. ಆದರೆ ಕೆಲವು ತಿಂಗಳುಗಳ ಹಿಂದೆ ದರ್ಶನ್ ಅವರ ಕುರುಕ್ಷೇತ್ರ ಚಿತ್ರ ಸೆಟ್ಟೇರಿದ್ದಾಗ ಟಿವಿ ಸಂದರ್ಶನವೊಂದರಲ್ಲಿ ದರ್ಶನ್ ಬಗ್ಗೆ ಮಾತನಾಡಿ ಅವರಿಗೆ ಶುಭಹಾರೈಸುವ ಮೂಲಕ ಸುದೀಪ್ ಅವರು ಮೆಚ್ಚುಗೆಗೆ ಪಾತ್ರರಾಗಿದ್ದರು.

 

 

ಈಗ ನೆನ್ನೆಯ ಬಿಗ್ ಬಾಸ್ ವೇದಿಕೆಯ ಮೇಲೆ ಮತ್ತೊಮ್ಮೆ ದರ್ಶನ್ ಹೆಸರನ್ನು ಸುದೀಪ್ ಪ್ರಸ್ತಾಪಿಸಿದ್ದಾರೆ. ಹೌದು ನೆನ್ನೆಯ ಬಿಗ್ ಬಾಸ್ ಫಿನಾಲೆ ಕಾರ್ಯಕ್ರಮಕ್ಕೆ ಮೂರನೇ ಸೀಸನ್ ನಲ್ಲಿ ರನ್ನರ್ ಅಪ್ ಆಗಿದ್ದ ಚಂದನ್ ಕುಮಾರ್ ಅವರು ಅಥಿತಿಯಾಗಿ ಆಗಮಿಸಿದ್ದರು. ಅವರು ನಾಯಕನಾಗಿ ನಟಿಸುತ್ತಿರುವ ಪ್ರೇಮಬರಹ ಚಿತ್ರ ಫೆಬ್ರವರಿ 09 ರಂದು ರಿಲೀಸ್ ಆಗುತ್ತಿರುವುದರಿಂದ ವೇದಿಕೆಯ ಪರದೆ ಮೇಲೆ ಪ್ರೇಮಬರಹದ ಟ್ರೈಲರ್ ಅನ್ನು ಪ್ರದರ್ಶಿಸಲಾಯಿತು.

 

 

ಪ್ರೇಮಬರಹದ ವಿಶೇಷ ಹಾಡೊಂದರಲ್ಲಿ ಸರ್ಜಾ ಫ್ಯಾಮಿಲಿಯ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಹೆಜ್ಜೆಹಾಕಿದ್ದಾರೆ. ಟ್ರೈಲರ್’ನಲ್ಲಿ ದರ್ಶನ್ ಅವರ ಹಾಡನ್ನು ಗಮನಿಸಿದ ಸುದೀಪ್ “ಚಿತ್ರದಲ್ಲಿ ದರ್ಶನ್ ಅವರದ್ದು ಏನು ಪಾತ್ರ? ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರಾ ಅಥವಾ ಸಾಂಗ್ ನಲ್ಲಿ ಮಾತ್ರಾನಾ ಇರೋದು” ಎಂದು ದರ್ಶನ್ ಹೆಸರನ್ನು ಪ್ರಸ್ತಾಪಿಸಿದರು. ಇದಕ್ಕೆ ಚಂದನ್ ಸ್ಪೆಷಲ್ ಸಾಂಗ್ ನಲ್ಲಿ ಮಾತ್ರ ಅಂತ ತಿಳಿಸಿದರು.

 

 

 

ದಿ ವಿಲನ್ ಚಿತ್ರದ ಮತ್ತೊಂದು ವಿಶೇಷತೆ ಬಹಿರಂಗ!

 

ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರ ಸದ್ಯ ಕನ್ನಡದ ಬಹು ನಿರೀಕ್ಷಿತ ಚಿತ್ರವಾಗಿದೆ . ಈ ಸಿನೆಮಾದ ಟೀಸರ್ ಮತ್ತು ಟ್ರೈಲರ್ ಗಾಗಿ ಎಲ್ಲರು ಕಾತರರಾಗಿದ್ದು ಯಾವಾಗ ಬಿಡುಗಡೆಯಾಗುತ್ತೆ ಎಂಬ ಪ್ರಶ್ನೆಗೆ ಇನ್ನೂ ತೆರೆಬಿದ್ದಿಲ್ಲ . ಕಿಚ್ಚ ಸುದೀಪ್ , ಶಿವರಾಜ್ ಕುಮಾರ್ , ಆಮಿ ಜ್ಯಾಕ್ಸನ್ ಸೇರಿದಂತೆ ಬೃಹತ್ ತಾರಾಗಣ ಈ ಚಿತ್ರಕ್ಕಿದೆ . ಈಗಾಗಲೇ ಅನೇಕ ಕಾರಣಗಳಿಗೆ ಸುದ್ದಿಯಾಗಿರುವ ಈ ಸಿನೆಮಾದ ಮತ್ತೊಂದು ವಿಶೇಷತೆ ಹೊರಬಂದಿದೆ .

 

 

ದಿನದಿಂದ ದಿನಕ್ಕೆ ಈ ಸಿನೆಮಾದ ಬಗೆಗಿನ ನಿರೀಕ್ಷೆಗಳು ಹೆಚ್ಚಾಗುತ್ತಲೇ ಇವೆ . ಈಗ ಈ ಚಿತ್ರದ ಬಗ್ಗೆ ಮತ್ತೊಂದು ಸುದ್ದಿ ಹೊರಬಂದಿದೆ . ಅದೇನಪ್ಪ ಅಂದ್ರೆ ಈ ಸಿನೆಮಾದಲ್ಲಿ ಹಾಸ್ಯಕ್ಕೂ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಲಾಗಿದೆಯಂತೆ . ಇದು ಒಂದು ಪಕ್ಕಾ ಕಮರ್ಷಿಯಲ್ ಸಿನೆಮಾವಾಗಿದೆಯಂತೆ . ಇದರಲ್ಲಿ ಪ್ರೇಮ , ಆಕ್ಷನ್ , ಸೆಂಟಿಮೆಂಟ್ ಮತ್ತು ಹಾಸ್ಯ ಎಲ್ಲವೂ ಇರುತ್ತವಂತೆ .

 

 

ಕುರಿ ಪ್ರತಾಪ್ , ಲೋಕೇಶ್ ಮತ್ತು ಶಿವರಾಜ್ ಕೆ ಆರ್ ಪೇಟೆ ಈ ಚಿತ್ರದಲ್ಲಿ ನಟಿಸಿದ್ದು , ಹೆಚ್ಚಿನ ಕಾಮಿಡಿಯನ್ನು ನಿರೀಕ್ಷಿಸಬಹುದಾಗಿದೆ .

 

ಬಿಗ್’ಬಾಸ್ ನಲ್ಲಿ ಗೆದ್ದಿರುವ ಹಣವನ್ನ ಈ ಕೆಲಸಕ್ಕೆ ಬಳಸ್ತಾರಂತೆ ಚಂದನ್ ಶೆಟ್ಟಿ!

 

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಷೋ ‘ಬಿಗ್ ಬಾಸ್ ಕನ್ನಡ ಸೀಸನ್-5’ ಅಂತ್ಯಗೊಂಡಿದೆ. ಬಹುತೇಕ ವೀಕ್ಷಕರ ಬಯಕೆಯಂತೆ ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಕಾಮನ್ ಮ್ಯಾನ್ ಕೋಟಾದಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ದಿವಾಕರ್‌ ಬಿಗ್‌ಬಾಸ್‌ ಸೀಸನ್ 5ನ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದು ಸೂಪರ್ ಸ್ಟಾರ್ ಜಯರಾಮ್ ಕಾರ್ತಿಕ್ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

 

 

ತಮ್ಮ ಮ್ಯೂಸಿಕ್ಸ್ ನಿಂದ ದೊಡ್ಡ ಮಟ್ಟದ ವೀಕ್ಷಕರ ಬಳಗವನ್ನು ಸೃಷ್ಟಿಸಿಕೊಂಡಿದ್ದ ಚಂದನ್ ವೀಕ್ಷಕರ ನಿರೀಕ್ಷೆಯಂತೆ ಬಿಗ್ ಬಾಸ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಚಂದನ್ ಅವರಿಗೆ ಟ್ರೋಫಿಯ ಜೊತೆ 50 ಲಕ್ಷ ರೂಪಾಯಿ ನಗದು ಬಹುಮಾನ ದಕ್ಕಿದೆ. ಬಹುಮಾನವಾಗಿ ಸಿಕ್ಕಿರುವ ಐವತ್ತು ಲಕ್ಷ ರೂಪಾಯಿಯಲ್ಲಿ ಚಂದನ್ ಶೆಟ್ಟಿ ಏನ್ ಮಾಡಬಹುದು ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿದ್ದರೆ ಅದಕ್ಕೆ ಇಲ್ಲಿದೆ ಉತ್ತರ!

 

 

“ಕೆಲವು ವಾರಗಳ ಹಿಂದೆಯಷ್ಟೇ ಟಾಸ್ಕ್ ವೊಂದರಲ್ಲಿ ಒಂದು ವೇಳೆ ಬಿಗ್ ಬಾಸ್ ಗೆದ್ದರೆ ಬರುವ ಹಣದಿಂದ ನಾವು ಒಂದು ಮನೆಯನ್ನು ಕಟ್ಟಿಸಿಕೊಳ್ಳುತ್ತೇವೆ. ನಮಗೆ ಈ ಭೂಮಿ ಮೇಲೆ ಸ್ವಂತ ಮನೆಯಿಲ್ಲ, ನಮ್ಮದೇ ಒಂದು ಸ್ವಂತ ಮನೆ ಮಾಡಬೇಕು ಎಂಬುದು ನನ್ನ ತಂದೆ ಆಸೆ. ಬಿಗ್ ಬಾಸ್ ಗೆದ್ರೆ ಬರುವ ಹಣದಲ್ಲಿ ನನ್ನ ತಂದೆ ಆಸೆಯಂತೆ ಒಂದು ಮನೆಯನ್ನು ಕಟ್ಟಿಸಿಕೊಳ್ಳುತ್ತೇನೆ!” ಎಂದು ಹೇಳಿದ್ದರು. ಅಲ್ಲದೆಚಂದನ್ ಅವರ ತಾಯಿ ಕೂಡ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ತಮ್ಮ ಮಗ ಗೆದ್ರೆ ಬರುವ ದುಡ್ಡಿನಿಂದ ಮನೆಕಟ್ಟಿಸಿಕೊಳ್ಳುವುದಾಗಿ ಹೇಳಿದ್ದರು. ಅದರಂತೆ ಬಹುಮಾನದ ಹಣದಲ್ಲಿ ಮನೆ ಕಟ್ಟಿಸಿಕೊಳ್ಳುವ ಸಾಧ್ಯತೆಯಿದೆ.

 

 

ಚಂದನ್ ಗೆಲುವಿನಲ್ಲಿ ಬದಲಾಯ್ತು ಸುದೀಪ್ ಕೈಗಳ ಪವಾಡದ ವದಂತಿ!

 

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಷೋ ‘ಬಿಗ್ ಬಾಸ್ ಕನ್ನಡ ಸೀಸನ್-5’ ಅಂತ್ಯಗೊಂಡಿದೆ. ಬಹುತೇಕ ವೀಕ್ಷಕರ ಬಯಕೆಯಂತೆ ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಕಾಮನ್ ಮ್ಯಾನ್ ಕೋಟಾದಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ದಿವಾಕರ್‌ ಬಿಗ್‌ಬಾಸ್‌ ಸೀಸನ್ 5ನ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದು ಸೂಪರ್ ಸ್ಟಾರ್ ಜಯರಾಮ್ ಕಾರ್ತಿಕ್ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ತಮ್ಮ ಮ್ಯೂಸಿಕ್ಸ್ ನಿಂದ ದೊಡ್ಡ ಮಟ್ಟದ ವೀಕ್ಷಕರ ಬಳಗವನ್ನು ಸೃಷ್ಟಿಸಿಕೊಂಡಿದ್ದ ಚಂದನ್ ವೀಕ್ಷಕರ ನಿರೀಕ್ಷೆಯಂತೆ ಬಿಗ್ ಬಾಸ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಚಂದನ್ ಅವರಿಗೆ ಟ್ರೋಫಿಯ ಜೊತೆ 50 ಲಕ್ಷ ರೂಪಾಯಿ ನಗದು ಬಹುಮಾನ ದಕ್ಕಿದೆ.. ವಿಶೇಷವೆಂದರೆ ಬಿಗ್ ಬಾಸ್ ಗೆಲುವಿನಲ್ಲಿ ಸುದೀಪ್ ಕೈಗಳ ಬಗ್ಗೆ ಇದ್ದ ವದಂತಿಗಳಿಗೆ ಬ್ರೇಕ್ ಬಿದ್ದಿದೆ.

 

 

ವಿಷಯ ಏನಂದರೆ, ಸುದೀಪ್ ಅವರು ವಿನ್ನರ್ ಅನ್ನು ಘೋಷಿಸುವಾಗ ಅಂತಿಮ ಇಬ್ಬರು ಸದಸ್ಯರನ್ನು ಅಕ್ಕಪಕ್ಕ ನಿಲ್ಲಿಸಿಕೊಂಡು ಅವರ ಕೈಗಳನ್ನ ಸುದೀಪ್ ಹಿಡಿದುಕೊಂಡು ಯಾರು ವಿಜೇತರು ಎಂದು ಒಬ್ಬರ ಕೈ ಮೇಲೆ ಎತ್ತಿ ವಿನ್ನರ್ ಹೆಸರನ್ನ ಘೋಷಣೆ ಮಾಡುತ್ತಾರೆ. ಹೀಗೆ, ಕಳೆದ ನಾಲ್ಕು ಸೀಸನ್ ಗಳಲ್ಲೂ(ಮೊದಲ ಸೀಸನ್ ಹೊರತು ಪಡಿಸಿ) ಸುದೀಪ್ ಅವರ ಎಡ ಭಾಗದಲ್ಲಿದ್ದ ಸ್ಪರ್ಧಿಗಳೇ ಬಿಗ್ ಬಾಸ್ ಗೆದ್ದಿದ್ದಾರೆ. ಹಾಗಾಗಿ ಯಾರು ಎಡಗಡೆ ನಿಲ್ಲುತ್ತಾರೋ ಅವರು ಗೆಲ್ಲುತ್ತಾರೆ ಎನ್ನುವ ಗುಮಾನಿ ಸೋಷಿಯಲ್ ಮೀಡಿಯಾಗಳಲ್ಲಿ ಬಾಯಿಗೆ ಬಂದಂತೆ ಗೀಚುವ ಅತೃಪ್ತ ಆತ್ಮಗಳಲ್ಲಿ ಹರಿದಾಡುತ್ತಿತ್ತು.

 

 

ಈ ಗುಮಾನಿ ಸಿಕ್ಕಾಪಟ್ಟೆ ಜೋರಾಗಿಯೇ ಇದ್ದರಿಂದ ಅದಕ್ಕೆ ಯಾವ ಭಾಗದಲ್ಲಿ ನಿಲ್ಲಬೇಕು ಎಂಬ ಆಯ್ಕೆಯನ್ನ ಸ್ವತಃ ಅಂತಿಮ ಸ್ಪರ್ಧಿಗಳಾದ ದಿವಾಕರ್ ಮತ್ತು ಚಂದನ್’ಗೆ ಬಿಟ್ಟುಕೊಟ್ಟರು. ಅದರ ಪ್ರಕಾರ ಚಂದನ್ ಸುದೀಪ್ ಅವರ ಬಲಗಡೆ ನಿಂತರೆ ದಿವಾಕರ್ ಅವರು ಎಡಗಡೆ ನಿಂತರು. ಅಂತಿಮವಾಗಿ ಚಂದನ್ ವಿನ್ನರ್ ಎಂದು ಘೋಷಣೆಯಾದರು. ಈ ಮೂಲಕ ಸುದೀಪ್ ಅವರ ಎಡ ಭಾಗದಲ್ಲಿ ನಿಲ್ಲುವ ಸ್ಪರ್ಧಿಗಳು ಗೆಲ್ಲುತ್ತಾರೆ ಎಂಬ ಗುಮಾನಿ ಹಬ್ಬಿಸುತ್ತಿದ್ದವರ ಬಾಯಿಗೆ ಬೀಗ ಬಿದ್ದಿದೆ.

 

ಟಗರು ಚಿತ್ರವನ್ನು ಫರ್ಸ್ಟ್ ಡೇ ಫರ್ಸ್ಟ್ ಶೋ ನೋಡೋಕೆ ಬರ್ತಿದ್ದಾರೆ ಸೌತ್ ಇಂಡಿಯಾದ ಸ್ಟಾರ್ ಡೈರೆಕ್ಟರ್: ಯಾರದು

 

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರ ಬಿಡುಗಡೆಗೆ ಹತ್ತಿರವಾಗುತ್ತಿದಂತೆ ಚಿತ್ರದ ಕ್ರೇಜ್ ಮತ್ತಷ್ಟು ಹೆಚ್ಚುತ್ತಿದೆ . ಈ ಸಿನೆಮಾದ ಮೇಲೆ ಹೆಚ್ಚಿನ ನಿರೀಕ್ಷೆಗಳಿದ್ದು , ಅಭಿಮಾನಿಗಳು ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ . ಈಗಾಗಲೇ ಸಿನೆಮಾದ ಟೀಸರ್ ಮತ್ತು ಹಾಡುಗಳು ರಿಲೀಸ್ ಆಗಿದ್ದು , ಸಿನೆಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ .

 

 

ಟಗರು ಚಿತ್ರವನ್ನು ನೋಡಲು ಸೌತ್ ಇಂಡಿಯಾದ ಸ್ಟಾರ್ ಡೈರೆಕ್ಟರ್ ಒಬ್ಬರು ಇಚ್ಛಿಸಿದ್ದಾರೆ . ಅವರು ಬೇರೆ ಯಾರು ಅಲ್ಲ ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್. ಟಗರು ಚಿತ್ರದ ಟೀಸರ್ ಅನ್ನು ನೋಡಿದ ಪೂರಿ ಜಗನ್ನಾಥ್ ಅವರಿಗೆ ಸಿನೆಮಾ ಸೆಳೆಯಿತಂತೆ . ಈ ಸಿನೆಮಾದ ಸಂಗೀತ ಮತ್ತು ಮೇಕಿಂಗ್ ಅನ್ನು ಪೂರಿ ಜಗನ್ನಾಥ್ ಅವರು ಮೆಚ್ಚಿಕೊಂಡಿದ್ದಾರೆ . ಆದ್ದರಿಂದ ಸಿನೆಮಾವನ್ನು ಮೊದಲ ದಿನವೇ ನೋಡಲು ಅವರು ಬೆಂಗಳೂರಿಗೆ ಬರುತ್ತಾರಂತೆ .

 

 

ಈ ವಿಷಯವನ್ನು ಟಗರು ಚಿತ್ರದ ನಿರ್ಮಾಪಕರಾದ ಶ್ರೀಕಾಂತ್ ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ . ಕೆಲವು ಮೂಲಗಳ ಪ್ರಕಾರ ಟಗರು ಚಿತ್ರ ಇದೇ ಪೆಬ್ರವರಿಗೆ ಬಿಡುಗಡೆಯಾಗಲಿದೆಯಂತೆ . ಒಟ್ಟಾರೆ ಟಗರು ಚಿತ್ರದ ಅಬ್ಬರ ಹೆಚ್ಚಾಗಿದ್ದು , ಚಿತ್ರವನ್ನು ನೋಡಲು ಸಿನಿರಸಿಕರು ಕಾತರರಾಗಿದ್ದಾರೆ .

 

ನೀವು ಒಮ್ಮೆ ಇಲ್ಲಿ ಮೂತ್ರ ಮಾಡಿದ್ರೆ ಬೇರೆಡೆ ಮೂತ್ರ ಮಾಡಲು ಬಯಸೊಲ್ಲ

ಶೌಚಾಲಯ ಕೇವಲ ಶೌಚ ಮಾಡುವ ಸ್ತಳವಲ್ಲದೆ ಕೆಲವರಿಗೆ ಸಿಗರೇಟ್ , ಬೀಡಿ ಸೇದುವ ಜಾಗವಾಗಿದೆ . ಇನ್ನು ಕೆಲವರಿಗೆ ಅಲ್ಲಿ ಹೊಸ ಐಡಿಯಾಗಳು ಹೊಳೆಯುತ್ತವೆ . ನೀವು ಇದುವರೆಗೆ ಎಷ್ಟೋ ರೀತಿಯ ಶೌಚಾಲಯಗಳನ್ನು ನೋಡಿರಬಹುದು . ಆದರೆ ನಾವು ಹೇಳುವ ಬಗೆಯ ಶೌಚಾಲಯಗಳನ್ನು ನೋಡಿರುವುದಿಲ್ಲ . ಇವು ಪ್ರಪಂಚದ ಚಿತ್ರ ವಿಚಿತ್ರ ಬಗೆಯ ಶೌಚಾಲಯಗಳಾಗಿವೆ .

1 . ಸ್ವೀಡ್ಜೆರ್ ಲ್ಯಾಂಡ್ ನ ಈ ಶೌಚಾಲಯದ ವಿಶೇಷವೇನಂದ್ರೆ ಹೊರಗಿನವರಿಗೆ ಒಳಗಿರುವವರು ಕಾಣಲ್ಲ . ಆದರೆ ಒಳಗಿರುವವರಿಗೆ ಹೊರಗಿನವರು ಕಾಣುತ್ತಾರೆ .

 

 

2 . ಟ್ರಾಫಿಕ್ ನಿವಾರಣೆಗೆ ಬಳಸುವ ಕೋನ್ ನಲ್ಲಿ ಮಾಡಿದ ಟಾಯ್ಲೆಟ್ .

 

 

3 . ಸಂಗೀತ ಪ್ರಿಯರಿಗಾಗಿ ನಿರ್ಮಿಸಿದ ಶೌಚಾಲಯವಿದು .

 

 

4 . ಜಪಾನಿಗರಿಗೆ ದೇವರು ಶೌಚಾಲಯದಲ್ಲಿ ಇರುತ್ತಾರೆ ಎಂಬ ನಂಬಿಕೆಯಿದ್ದು , ದೇವರನ್ನು ಸಂತೋಷಪಡಿಸಲು ಶೌಚಾಲಯವನ್ನು ಚೆನ್ನಾಗಿ ಶೃಂಗರಿಸಿದ್ದಾರೆ .

 

 

5 . ಜಪಾನಿನ ಸಂಸ್ಕೃತಿ ಯಾವಾಗಲೂ ಆಕರ್ಷಕ ಮತ್ತು ವಿಚಿತ್ರವಾಗಿರುತ್ತದೆ. ಇದು ದಂಪತಿಗಳ ಶೌಚಾಲಯ .

 

 

6 . ಈ ಟಾಯ್ಲೆಟ್ ಗೆ ಹೋಗುವವರು ಹೊರ ಬರಲು ಇಷ್ಟಪಡೋದೇ ಇಲ್ಲ ಬಿಡಿ .

 

 

7 . ಇದು ಒಂದು ಸುಂದರವಾದ ಟಾಯ್ಲೆಟ್ .

 

 

8 . ಈ ಶೌಚಾಲಯವನ್ನು ಮರುಬಳಕೆ ಮಾಡಬಹುದಾದ ವಸ್ತುಗಳಿಂದ ತಯಾರಿಸಲಾಗಿದೆ . ಇದನ್ನು ಪರಿಸರ ಸ್ನೇಹಿ ಟಾಯ್ಲೆಟ್ ಅಂತಾನೆ ಹೇಳ್ಬೋದು .

 

 

9 . ಈ ಶೌಚಾಲಯದ ಕಮೋಡ್ ಅನ್ನು ತೆಗೆದಾಗ ಹಾವೊಂದು ಸೆಡೆಯೆತ್ತುತ್ತದೆ .

 

 

10. ಇದು ಗೇಮಿಂಗ್ ಶೌಚಾಲಯವಾಗಿದ್ದು , ಈ ಶೌಚಾಲಯದ ವಿಶೇಷತೆಯೇನಂದ್ರೆ ಸರಿಯಾದ ಸ್ಥಳದಲ್ಲಿ ಮೂತ್ರ ವಿಸರ್ಜಿಸಿದಾಗ ಆಟ ಪ್ರಾರಂಭವಾಗುತ್ತದೆ.

 

ನೀವು ಹಾಕಿಕೊಳ್ಳುವ ಚಪ್ಪಲಿಯಲ್ಲೂ ಗ್ರಹದೋಷವಿರುತ್ತದೆಯಂತೆ

 

 

ನಾವು ಹಾಕಿಕೊಳ್ಳುವ ಚಪ್ಪಲಿ ಅಲ್ಲಿ ಕೂಡ ಗ್ರಹಗಳಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರರು ಹೇಳುತ್ತಾರೆ .ಚಪ್ಪಲಿ ಮೇಲೆ ಕೂಡ ಗ್ರಹವಿರುತ್ತದೆ ಪ್ರಭಾವವಿರುತ್ತದೆ. ಕೆಲವು ಸಿದ್ದಾಂತಗಳ ಪ್ರಕಾರ ಮನುಷ್ಯನ ಜಾತಕವು 8 ನೇ ಮನೆ ಆತನ ಪಾದಕ್ಕೆ ಸಂಬಂಧಿಸಿರುತ್ತದೆ.

ಕೆಲವೊಮ್ಮೆ ನಾವು ಹಾಕಿಕೊಳ್ಳುವ ಚಪ್ಪಲಿಗಳು ನಮ್ಮ ಜಾತಕದ ಮೇಲೆ ಪರಿಣಾಮವನ್ನ ಬೀರುತ್ತದೆ. ನಮ್ಮ ಜೀವನದಲ್ಲಿ ಆರ್ಥಿಕ ಕಷ್ಟಗಳು .ತೊಂದರೆಗಳು ಬರುವಂತೆ ಮಾಡುತ್ತದೆ. ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ಚಪ್ಪಲಿಗಳ ಮೇಲೆ ಶನಿ ಅಧಿಪತ್ಯ ಸಾದಿಸಿರುತ್ತಾನೆ.ಹೀಗಾಗಿ ಚಪ್ಪಲಿ ಧರಿಸುವ ವೇಳೆ ಕೆಲವೊಂದು ವಿಷಯಗಳನ್ನ ತಿಳಿದುಕೊಳ್ಳಬೇಕು.

 

 

 

 

 

ಉಡುಗರೆಯಾಗಿ ನೀಡಿದ ಚಪ್ಪಲಿ ಮತ್ತು ಕದ್ದಿರುವ ಚಪ್ಪಲಿ ನಾವು ಹಾಕಿಕೊಳ್ಳಬಾರದು ಯಾಕೆಂದರೆ ನಮಗೆ ಇನ್ನು ಕಷ್ಟಗಳಿಗೆ ಎದುರಾಗುತ್ತವೆ ಮತ್ತು ಆರ್ಥಿಕ ಸಮಸ್ಯೆಗೆ ಸಿಲುಕಿ ಒದ್ದಾಡಬೇಕಿದೆ.
ಹರಿದ ಮತ್ತು ಕಿತ್ತುಹೋಗಿರುವ ಚಪ್ಪಲಿಯನ್ನ ನಾವು ಹಾಕಿಕೊಳಬಾರದು ಅದರಲ್ಲಿನ ಶನಿ ನಮ್ಮ ಜಾತಕದ ಮೇಲೆ ಪ್ರಭಾವ ಬಿರುತ್ತಾನೆ ಎಂದು ಜ್ಯೋತಿಷ್ಯ ಶಾಸ್ತ್ರರು ವ್ಯಕ್ತಪಡಿಸಿದ್ದಾರೆ.

 

 

 

 

ನಾವು ಕೆಲಸ ಮಾಡುವ ಕಛೇರಿ ಮತ್ತು ಸ್ಥಳಗಳಲ್ಲಿ ಬೂದು ಬಣ್ಣದ ಶೊ ಹಾಕಿಕೊಂಡರೆ ಕೆಲಸದಲ್ಲಿ ಸಲ್ಪ ವ್ಯೆತ್ಯಾಸ ಉಂಟಾಗುತ್ತದೆ.
ನೀರಿಗೆ ಸಂಬಂದಿಸಿದ ಹಾಗು ಆಯುರ್ವೇದಕ್ಕೆ ಸಂಬಂದಿಸಿದ ವ್ಯೆಕ್ತಿಗಳು ನೀಲಿ ಬಣ್ಣದ ಚಪ್ಪಲಿಯನ್ನ ಹಾಕಬಾರದು ಎಂದು ಜ್ಯೋತಿಷ್ಯ ಶಾಸ್ತ್ರರು ಹೇಳುತ್ತಾರೆ ಹಾಕಿದರೆ ಜಾತಕದಲ್ಲಿ ತೊಂದರೆ ಉಂಟಾಗುತ್ತದೆ ಮತ್ತು ಸಮಸ್ಯೆ ಎದುರಾಗುತ್ತದೆ ಎಂದು ಹೇಳುತ್ತಾರೆ.